ನಮ್ಮ ಶಾಲೆಯು ಮಕ್ಕಳ ಸರ್ವಾ೦ಗೀಣ ಬೆಳವಣಿಗೆಯಾಗಲು ಸಹಕರಿಸುತ್ತಿದೆ.
- ಜ್ಞಾನ ವಸ್ತು ಪ್ರದರ್ಶನ : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನದಂದು ಪಾಠಕ್ಕೆ ಪೂರಕವಾಗಿರುವ ಚಟುವಟಿಕೆ ಹಾಗು ಮಾದರಿಗಳನ್ನು ಮಾಡುವಂತೆ ಪ್ರೇರೇಪಿಸಲಾಗುತ್ತದೆ.
- ಸಹಪಠ್ಯ ಚಟುವಟಿಕೆಗಳು : ಅಣುಕು ಸಂಸತ್ತು, ಚರ್ಚಾ ಸ್ಪರ್ಧೆ, ರಸ ಪ್ರಶ್ನೆ, ಭೂಪಟ ಓದುವುದು, ಆಶುಭಾಷಣ ಸ್ಪರ್ಧೆ ಇವುಗಳನ್ನು ನಡೆಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಹಕರಿಸುತ್ತೇವೆ.
- ಪ್ರತಿಭಾ ಪರೀಕ್ಷೆ: ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಲು ಮಕ್ಕಳಿಗೆ ಪ್ರತಿಭಾ ಪರೀಕ್ಷೆಗಳನ್ನು ನಡೆಸುತ್ತೇವೆ.
- ಪ್ರಾತ್ಯಕ್ಷಿಕ ಪಾಠ : ಮಕ್ಕಳಿಗೆ ಕ್ಲಿಷ್ಠವಾಗಿರುವ ಸಂಗತಿಗಳನ್ನು ಸುಲಭವಾಗಿ ಅರ್ಥೈಸಿಕೊಳಲು ಸಹಾಯ ಮಾಡುತ್ತೇವೆ.