ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆ ಕರ್ನಾಟಕ ಸರ್ಕಾರದಿಂದ ಅಂಗೀಕೃತವಾಗಿದೆ. ನಮ್ಮ ಬೋಧನ ವಿಧಾನವು ಚಟುವಟಿಕೆ ಆಧಾರಿತವಾಗಿದೆ ಮತ್ತು ಮಕ್ಕಳೇ ಕೇಂದ್ರ ಬಿಂದು. ಶಿಕ್ಷಕರು ಸುಗಮಕಾರರು. ಸಂಕಲನಾತ್ಮಕ ಪರೀಕ್ಷೆ ಮತ್ತು ರೂಪಣಾತ್ಮಕ ಪರೀಕ್ಷೆಯನ್ನು ಸರ್ಕಾರದ ನಿಯಮಾವಳಿಯಂತೆ ನಡೆಸಲಾಗುತ್ತದೆ. ಕನಿಷ್ಠ ‘ಬಿ’ ಶ್ರೇಣಿ ತೆಗೆದ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಉತ್ತೀರ್ಣರಾಗುತ್ತಾರೆ. ಶಾಲಾ ಪುನರಾರಂಭ ಮೇ ತಿಂಗಳಲ್ಲಿ ಆಗುತ್ತದೆ ಮತ್ತು ಶಾಲೆಯ ಫಲಿತಾಂಶ ಏಪ್ರಿಲ್ ೧೦ಕ್ಕೆ ಘೋಷಿಸಲಾಗುತ್ತದೆ. ನಮ್ಮಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮದ ತರಗತಿಗಳು ನಡೆಯುತ್ತವೆ.
ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಕರು ಸರ್ವಾ೦ಗೀಣ ಬೆಳೆವಣಿಗೆಗೆ ಬೇಕಾದ ಎಲ್ಲಾ ಅವಶ್ಯತೆಗಳನ್ನು ಪೂರೈಸುತ್ತಾರೆ. ಆಧುನಿಕ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತಂತ್ರಜ್ಞಾನದಲ್ಲಿಯೂ ಪರಿಣತಿಯನ್ನು ಪಡೆದಿದ್ದಾರೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪ್ರತಿ ಶಿಕ್ಷಕರು ನವೀನ ಶಿಕ್ಷಣ ಪದ್ದತಿಯನ್ನು ತರಗತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.