Our Mission - Seshadripuram Educational Trust

ನಮ್ಮ ಬಗ್ಗೆ

ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯ ಮಕ್ಕಳೇ ಕೇಂದ್ರ ಬಿಂದು. ಆಂಗ್ಲಕವಿ ವಿಲಿಯಂ ವರ್ಡ್ಸ್.ವರ್ಥ್ “ಮಗು ಮನುಕುಲದ ಜನಕ” ಎಂದಿದ್ದಾರೆ. ಮಕ್ಕಳು ಸಂತೋಷವಾಗಿ ಮತ್ತು ಜಯಶಾಲಿಗಳಾಗಿ ಇರಬೇಕಾದರೆ ಗಣಿತ, ಆಂಗ್ಲ ಭಾಷೆ , ಕನ್ನಡ, ಭೂಗೋಳ ಶಾಸ್ತ್ರ ಕಲಿಯುವುದು ಮಾತ್ರವಲ್ಲ, ಇದರೊಟ್ಟಿಗೆ ಸೃಜನಶೀಲತೆ, ಆಲೋಚನಾ ಶಕ್ತಿ ಮಕ್ಕಳ ವ್ಯಕ್ತಿತ್ವ ವಿಕಸನ, ಅಭಿರುಚಿ ಮತ್ತು ಆತ್ಮ ವಿಶ್ವಾಸ ಬೆಳೆಸಲು ನಮ್ಮ ಸಂಸ್ಥೆ, ನಮ್ಮ ಶಾಲಾ ಸಿಬ್ಬ೦ದಿ ಮತ್ತು ಪೋಷಕರ ಪಾತ್ರ ಬಹಳ ಮಹತ್ವದ್ದು.


ಮುಖ್ಯ ಶಿಕ್ಷಕರ ಮಾತು

“ಶಿಕ್ಷಣವೆಂಬುದು ಜ್ಞಾನಾರ್ಜನೆ ಮಾತ್ರವಲ್ಲ, ಯುವ ಮನಸ್ಸುಗಳನ್ನೂ ವ್ಯವಸ್ಥಿತಗೊಳಿಸುವ ಪ್ರಕ್ರಿಯೆ. ಮಕ್ಕಳ ಇಂದಿನ ಕಲಿಕೆ, ನಾಳಿನ ಜಗತ್ತಿಗೆ ನಾಂದಿಯಾಗುತ್ತದೆ”.

Principal
ಎಸ್. ಜಗದಾಂಬ

ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಗೆ ಒಳ್ಳೆಯ ಇತಿಹಾಸವಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಾವಂತರು ಮತ್ತು ಸಾಧನೆಗೈದವರು ಇದ್ದಾರೆ. ಇಂದು ಹಾಗೂ ನಾಳೆಯ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯಷ್ಟೇ ಅಲ್ಲದೆ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣದ ಅಗತ್ಯತೆ ಇದೆ. ಇದೇ ರೀತಿಯ ಸಹಕಾರವನ್ನು ಪೋಷಕರಿಂದ ನಿರೀಕ್ಷಿಸುತ್ತೇವೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಪೋಷಕರ ಪಾತ್ರ ಮಹತ್ವದಾಗಿದೆ.