ಸೌಲಭ್ಯಗಳು

ಸೌಲಭ್ಯಗಳು

ಮಕ್ಕಳ ಬೌದ್ಧಿಕ ಮಟ್ಟಕ್ಕನುಗುಣವಾಗಿ ಆಟೋಟಗಳು, ಪ್ರಯೋಗಾಲಯ, ವಾಚನಾಲಯ ಇವುಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ.

ಶಾಲಾ ಕೊಠಡಿಗಳು

ತರಗತಿ ಕೊಠಡಿಗಳಲ್ಲಿ ಕಲಿಕೆಯು ಸುಗಮವಾಗಿ ನಡೆಯಲು ಬೇಕಾದ ಗಾಳಿ ಬೆಳಕು, ಕುಳಿತುಕೊಳ್ಳಲು ಬೇಕಾದ ಸುಸಜ್ಜಿತ ಪೀಠೋಪರಣಗಳ ಸೌಲಭ್ಯವಿದೆ.

ಸಭಾಂಗಣ

ನಮ್ಮಲ್ಲಿ ಸಂಗೀತ, ನೃತ್ಯ, ರಸ ಪ್ರಶ್ನೆ, ಸ್ಪರ್ಧೆಗಳನ್ನು ನಡೆಸಲು ಬೇಕಾದ ಸುಸಜ್ಜಿತ ಸಭಾಂಗಣವಿದೆ.

ರಂಗ ಮಂದಿರ

ನಮ್ಮ ಶಾಲೆಯಲ್ಲಿ ನಡೆಯುವ ರಾಷ್ಟೀಯ ಹಬ್ಬಗಳು, ಶಾಲಾ ವಾರ್ಷಿಕೋತ್ಸವ ಮತ್ತು ಇತರ ಸ್ಪರ್ದೆಗಳನ್ನು ನಡೆಸಲು ಕುವೆಂಪು ರಂಗಮಂದಿರವಿದೆ.


ವಾಚನಾಲಯ

ವಾಚನಾಲಯದಲ್ಲಿ ಸುಮಾರು ೩೦೦೦ ಪುಸ್ತಕಗಳಿವೆ. ಮಕ್ಕಳು ಅದನ್ನು ತೆಗೆದು ಓದಿ ಮತ್ತೆ ಅದೇ ಜಾಗದಲ್ಲಿ ಇಡುವ ಹವ್ಯಾಸವನ್ನು ನಮ್ಮ ಶಿಕ್ಷಕರು ಮಕ್ಕಳಿಗೆ ತಿಳಿಸಿದ್ದಾರೆ. ಕನ್ನಡ ಮತ್ತು ಆಂಗ್ಲ ವರ್ತಮಾನ ಪತ್ರಿಕೆಗಳನ್ನು ಓದುವ ಅವಕಾಶವಿದೆ.


ಲ್ಯಾಬೊರೇಟರೀಸ್

ಕಂಪ್ಯೂಟರ್ ಲ್ಯಾಬ್

Lab

ನಮ್ಮಲ್ಲಿ ಸುವ್ಯವಸ್ಥಿತವಾದ ಕಂಪ್ಯೂಟರ್ ಕೊಠಡಿ ಇದೆ. ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಆಯಾ ತರಗತಿಗೆ ಅನುಗುಣವಾದ ಕಂಪ್ಯೂಟರ್, ಆಪರೇಟಿಂಗ್ ಸಿಸ್ಟಮ್, ಎಂ.ಎಸ್.ಆಫೀಸ್ ಮುಂತಾದವುಗಳ ತರಬೇತಿ ನೀಡಲಾಗುತ್ತದೆ.

ವಿಜ್ಞಾನ ಪ್ರಯೋಗಾಲಯ

Lab

ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವು ಅಗತ್ಯ ಉಪಕರಣಗಳನ್ನು, ರಾಸಾಯನಿಕ ವಸ್ತುಗಳನ್ನು, ವಿಜ್ಞಾನ ಮಾದರಿಗಳನ್ನು ಒಳಗೊಂಡಿದೆ.


ಆರೋಗ್ಯ ಸೇವೆ

health-care

ಪ್ರತಿದಿನ ಮಕ್ಕಳು ಆರೋಗ್ಯ ತಪ್ಪಿದಲ್ಲಿ ವೈದ್ಯರ ಸಹಾಯ ಪಡೆಯುವ ಅನುಕೂಲ ನಮ್ಮ ಶಾಲೆಯಲ್ಲಿದೆ. ನಮ್ಮಲ್ಲಿ ಅರೋಗ್ಯ ಕೇಂದ್ರವಿದೆ ಹಾಗು ನುರಿತ ವೈದ್ಯರಿದ್ದಾರೆ. ಮಕ್ಕಳಿಗೆ ವರ್ಷಕ್ಕೊ೦ದು ಸಲ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.