ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಗೆ ಒಳ್ಳೆಯ ಇತಿಹಾಸವಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಾವಂತರು ಮತ್ತು ಸಾಧನೆಗೈದವರು ಇದ್ದಾರೆ. ಇಂದು ಹಾಗೂ ನಾಳೆಯ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯಷ್ಟೇ ಅಲ್ಲದೆ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣದ ಅಗತ್ಯತೆ ಇದೆ. ಇದೇ ರೀತಿಯ ಸಹಕಾರವನ್ನು ಪೋಷಕರಿಂದ ನಿರೀಕ್ಷಿಸುತ್ತೇವೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಪೋಷಕರ ಪಾತ್ರ ಮಹತ್ವದಾಗಿದೆ.