ಕ್ರೀಡಾ ಚಟುವಟಿಕೆಗಳು
ಮಕ್ಕಳು ಉತ್ತಮವಾಗಿ ಬೆಳೆಯಲು ಆಟಗಳು ಬಹಳ ಮುಖ್ಯ. ನಮ್ಮಲ್ಲಿ ಒಳಾಂಗಣ ಆಟ ಮತ್ತು ಹೊರಾಂಗಣ ಆಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕ ಕ್ರೀಡಾ ಕೂಟಗಳನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಗುತ್ತಿದೆ.
ಸಹಪಠ್ಯ ಚಟುವಟಿಕೆಗಳು
ನಮ್ಮ ಶಾಲೆಯು ಮಕ್ಕಳ ಸರ್ವಾ೦ಗೀಣ ಬೆಳವಣಿಗೆಯಾಗಲು ಸಹಕರಿಸುತ್ತಿದೆ.
- ವಿಜ್ಞಾನ ವಸ್ತು ಪ್ರದರ್ಶನ : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನದಂದು ಪಾಠಕ್ಕೆ ಪೂರಕವಾಗಿರುವ ಚಟುವಟಿಕೆ ಹಾಗು ಮಾದರಿಗಳನ್ನು ಮಾಡುವಂತೆ ಪ್ರೇರೇಪಿಸಲಾಗುತ್ತದೆ.
- ಸಹಪಠ್ಯ ಚಟುವಟಿಕೆಗಳು : ಅಣುಕು ಸಂಸತ್ತು, ಚರ್ಚಾ ಸ್ಪರ್ಧೆ, ರಸ ಪ್ರಶ್ನೆ, ಭೂಪಟ ಗುರ್ತಿಸುವುದು, ಆಶುಭಾಷಣ ಸ್ಪರ್ಧೆ ಇವುಗಳನ್ನು ನಡೆಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಹಕರಿಸುತ್ತೇವೆ.
- ಪ್ರತಿಭಾ ಪರೀಕ್ಷೆ: ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಲು ಮಕ್ಕಳಿಗೆ ಪ್ರತಿಭಾ ಪರೀಕ್ಷೆಗಳನ್ನು ನಡೆಸುತ್ತೇವೆ.
- ಪ್ರಾತ್ಯಕ್ಷಿಕ ಪಾಠ : ಮಕ್ಕಳಿಗೆ ಕ್ಲಿಷ್ಠವಾಗಿರುವ ಸಂಗತಿಗಳನ್ನು ಸುಲಭವಾಗಿ ಅರ್ಥೈಸಿಕೊಳಲು ಸಹಾಯ ಮಾಡುತ್ತೇವೆ.
ಸ್ಕೌಟ್ಸ್ ಅಂಡ್ ಗೈಡ್ಸ್
ಭಾರತ ಸೇವಾದಳ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ : ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಮಕ್ಕಳಲ್ಲಿ ಸೇವಾ ಮನೋಭಾವ ದೇಶದ ಬಗ್ಗೆ ಅಭಿಮಾನ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಭಾರತ ಸೇವಾದಳ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಅವಶ್ಯಕತೆ ಇದೆ. ಇದನ್ನು ನಮ್ಮ ಶಾಲೆಯಲ್ಲಿ ಹೇಳಿ ಕೊಡುತ್ತಿದ್ದೇವೆ.